ಓ ನನ್ನ ಚೇತನಾ

OH MY CONSCIOUSNESS / SOUL / INNER SELF

ತನುವು ನಿನ್ನದು ಮನವು ನಿನ್ನದು, 
ಎನ್ನ ಜೀವನ ಧನವು ನಿನ್ನದು,
ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು !!
ತನುವು ನಿನ್ನದು ಮನವು ನಿನ್ನದು… 

ನೀನು ಹೊಳೆದರೆ ನಾನು ಹೊಳೆವೆನು, 
ನೀನು ಬೆಳೆದರೆ ನಾನು ಬೆಳೆವೆನು,
ನನ್ನ ಹರಣದ ಹರಣ ನೀನು, ನನ್ನ ಮರಣದ  ಮರಣವು !!
ತನುವು ನಿನ್ನದು ಮನವು ನಿನ್ನದು… 

ನನ್ನ ಮನದಲಿ ನೀನೆ ಯುಕ್ತಿ , 
ನನ್ನ ಹೃದಯದಿ ನೀನೆ ಭಕ್ತಿ,
ನೀನೆ ಮಾಯಾ ಮೋಹ ಶಕ್ತಿಯು, ನನ್ನ ಜೀವನ ಮುಕ್ತಿಯು !!
ತನುವು ನಿನ್ನದು ಮನವು ನಿನ್ನದು…